ಶುಕ್ರವಾರ, ನವೆಂಬರ್ 18, 2011

ಪ್ರೀತಿ ಅಂದರೇನು...?

ಕೇಳಲಾರೆ ಅಂದುಕೊಂಡಿದ್ದೆ
ಹೇಳೆಂದು ಹಟ ಹಿಡಿದೆ
ಗೆಳೆಯ ಪ್ರೀತಿಯೆಂದರೇನು...?
ಗೆಳೆಯ ಪ್ರೀತಿ ಎಂದರೇನು...?

ಕೆರೆಯ ಬದಿಯಲ್ಲಿ ಕುಳಿತಾಗ
ಮನಬಿಚ್ಚಿ ಹೇಳಿದ್ದೆ
ನೀರ ನಲಿವಿನಂತೆ
ಗದ್ದೆ ಸಂಧಿಯನು ತುಳಿದಾಗ
ದಿನ ಸಂಜೆ ತಿಳಿಸಿದ್ದು
ಪ್ರಕೃತಿ ಚೆಲುವಿನಂತೆ

ಗೆಳತಿ,
ಪ್ರೀತಿಯೆಂದರೆ
ಮತಿಗೋ ಸಿಲುಕದ
ಕಲ್ಪನೆಗೋ ನಿಲುಕದ
ಎರಡು ಹೃದಯಗಳ ಸ್ಪಂದನವಿರಬಹುದೇನೋ....

ಓ...ಗೆಳತಿ....ಬಾ...............

ಅಂತರಾತ್ಮದ ಬೆಳಕೊಳು
ಬದುಕ ದೃಷ್ಟಿಸೊ ಕಣ್ಣಾಗಿ
ಈ ಹೃದಯ ಹಾದಿಯೊಳು
ಮತ್ತೆ ಬಾ ...ಹೆಣ್ಣಾಗಿ


ದಾಹದ ವಾರಿಧಿಯ ತಡೆದು
ಕಾಮಕ್ಕೆ ಪರಿಧಿಯ ಹೆಣೆದು
ಭುವಿಯಂತಿಹ ದೇಹವ ಪಡೆದು
ಮತ್ತೆ ಮತ್ತೆ ಬಾ...ಕುಣಿದು

ಪ್ರೀತಿಸ್ನೇಹಕ್ಕೆ ಅನಂತ ಬಾನು
ನೀ ನಿತ್ಯ ಜೀವನ ಒಡತಿಯೇ
ಸತ್ಯದೀಪವೇ ಆಗಿ ನೀನು
ಮತ್ತೆ ಮತ್ತೆ ಬಾ...ನನ್ನ ಗೆಳತಿಯೇ
                                         by ,

                                                   ರಾಜ್......

ಗುರುವಾರ, ನವೆಂಬರ್ 3, 2011

ನನ್ನೊಲವಿನ ಗೆಳತಿ

ಮಳೆಹನಿಯ ಮುನ್ನುಡಿಗೆ
ಹೆಜ್ಜೆ ಹಾಕು ಕುಣಿಯುತಾ...
ಒಲವಿನ ದಾರಿಯಲಿ
ಬಾರಿ ಬಾರಿ ಕರೆಯುತಾ....

ಚಂದಿರನ ಕಾಂತಿಯು
ನೀನಾಗಿರಲು...
ಕನ್ನಡಿಯ ತಾ ಹಿಡಿಯುವೆನು
ಮಂದಿರದ ಗುಡಿಯೊಳು
ದೇವಿಯಾಗಿ ನೆಲೆಸಲು
ಪೂಜಿಸೋ ಅರ್ಚಕ ನಾನಗುವೆನು....
ನಿನ್ನ ನುಡಿಯು ಕೇಳುತಿರೆ
ನಾ ಕಪ್ಪೆಚಿಪ್ಪಾಗುವೆನು
ನೀ ನಗು ತುಂಬಿ ಬರಲು
ನಾ ಹೂವ ತಂದು ಸುರಿಯುವೆನು
ಒಲುಮೆಯ ತಂದು ನೆಲೆಸು ಬಾ.....
ಗೆಳತಿ,
ಭೂ ಸಿರಿಯ ಗರ್ಭವನು
ಮುಂಗಾರು ತಂಪೆರೆಯಲು
ನೆನೆದ ಮನಸ್ಸಿಂದ
ಮೇಘ ಸಂದೇಶವನು ಕಳಿಸೆಯಾ....?
ಹೇಳು ಕಳಿಸುವೆಯಾ...?