ಶುಕ್ರವಾರ, ನವೆಂಬರ್ 18, 2011

ಪ್ರೀತಿ ಅಂದರೇನು...?

ಕೇಳಲಾರೆ ಅಂದುಕೊಂಡಿದ್ದೆ
ಹೇಳೆಂದು ಹಟ ಹಿಡಿದೆ
ಗೆಳೆಯ ಪ್ರೀತಿಯೆಂದರೇನು...?
ಗೆಳೆಯ ಪ್ರೀತಿ ಎಂದರೇನು...?

ಕೆರೆಯ ಬದಿಯಲ್ಲಿ ಕುಳಿತಾಗ
ಮನಬಿಚ್ಚಿ ಹೇಳಿದ್ದೆ
ನೀರ ನಲಿವಿನಂತೆ
ಗದ್ದೆ ಸಂಧಿಯನು ತುಳಿದಾಗ
ದಿನ ಸಂಜೆ ತಿಳಿಸಿದ್ದು
ಪ್ರಕೃತಿ ಚೆಲುವಿನಂತೆ

ಗೆಳತಿ,
ಪ್ರೀತಿಯೆಂದರೆ
ಮತಿಗೋ ಸಿಲುಕದ
ಕಲ್ಪನೆಗೋ ನಿಲುಕದ
ಎರಡು ಹೃದಯಗಳ ಸ್ಪಂದನವಿರಬಹುದೇನೋ....

ಓ...ಗೆಳತಿ....ಬಾ...............

ಅಂತರಾತ್ಮದ ಬೆಳಕೊಳು
ಬದುಕ ದೃಷ್ಟಿಸೊ ಕಣ್ಣಾಗಿ
ಈ ಹೃದಯ ಹಾದಿಯೊಳು
ಮತ್ತೆ ಬಾ ...ಹೆಣ್ಣಾಗಿ


ದಾಹದ ವಾರಿಧಿಯ ತಡೆದು
ಕಾಮಕ್ಕೆ ಪರಿಧಿಯ ಹೆಣೆದು
ಭುವಿಯಂತಿಹ ದೇಹವ ಪಡೆದು
ಮತ್ತೆ ಮತ್ತೆ ಬಾ...ಕುಣಿದು

ಪ್ರೀತಿಸ್ನೇಹಕ್ಕೆ ಅನಂತ ಬಾನು
ನೀ ನಿತ್ಯ ಜೀವನ ಒಡತಿಯೇ
ಸತ್ಯದೀಪವೇ ಆಗಿ ನೀನು
ಮತ್ತೆ ಮತ್ತೆ ಬಾ...ನನ್ನ ಗೆಳತಿಯೇ
                                         by ,

                                                   ರಾಜ್......

ಗುರುವಾರ, ನವೆಂಬರ್ 3, 2011

ನನ್ನೊಲವಿನ ಗೆಳತಿ

ಮಳೆಹನಿಯ ಮುನ್ನುಡಿಗೆ
ಹೆಜ್ಜೆ ಹಾಕು ಕುಣಿಯುತಾ...
ಒಲವಿನ ದಾರಿಯಲಿ
ಬಾರಿ ಬಾರಿ ಕರೆಯುತಾ....

ಚಂದಿರನ ಕಾಂತಿಯು
ನೀನಾಗಿರಲು...
ಕನ್ನಡಿಯ ತಾ ಹಿಡಿಯುವೆನು
ಮಂದಿರದ ಗುಡಿಯೊಳು
ದೇವಿಯಾಗಿ ನೆಲೆಸಲು
ಪೂಜಿಸೋ ಅರ್ಚಕ ನಾನಗುವೆನು....
ನಿನ್ನ ನುಡಿಯು ಕೇಳುತಿರೆ
ನಾ ಕಪ್ಪೆಚಿಪ್ಪಾಗುವೆನು
ನೀ ನಗು ತುಂಬಿ ಬರಲು
ನಾ ಹೂವ ತಂದು ಸುರಿಯುವೆನು
ಒಲುಮೆಯ ತಂದು ನೆಲೆಸು ಬಾ.....
ಗೆಳತಿ,
ಭೂ ಸಿರಿಯ ಗರ್ಭವನು
ಮುಂಗಾರು ತಂಪೆರೆಯಲು
ನೆನೆದ ಮನಸ್ಸಿಂದ
ಮೇಘ ಸಂದೇಶವನು ಕಳಿಸೆಯಾ....?
ಹೇಳು ಕಳಿಸುವೆಯಾ...?

ಭಾನುವಾರ, ಅಕ್ಟೋಬರ್ 23, 2011

ಗೆಳತಿ .....
ಪದಪದಗಳಲ್ಲಿ ಮೆಲ್ಲುವ ಸವಿ ಇರಲು
ಕದತಟ್ಟದಿರುವುದೇ ಈ ಸಾಲುಗಳು
ಆ ನೆನಪುಗಳ ಮರೆಯದಿರು ಮನಸೇ....
ಈ ಜೀವದಾರಿಯಲಿ ಅವುಗಳಲ್ಲವೇ ಕನಸು..
ನನಗನಿಸುವುದು ಈ ಭಾವನೆಲೆಯಲಿ
ದೂರಸರಿಯದೆ ಮತ್ತೆ ನನಸಾಗಿ ಬರಲಿ...
ಈ ಕವಿತೆ ಬರವಣಿಗೆ..
ಈ ಹಣತೆ ಮೆರವಣಿಗೆ...
by...
raj....ಕಣೆ...
ಮೌನದೊಳು ಗಾಳಿಯು
ಬೀಸುತ್ತಿರೆ ನಿನ್ನ  ಮುಂಗುರುಳೆ
ಚಂದವೂ ....
ಸುದೆಬದಿಯಲಿ ನೀನಿರೆ
ಬಿಸಿಯುಸಿರ ಏನೋ
ಸ್ಪರ್ಶವು....
ಮುನಿಸು..ನೋವು... ಜಾರಿ ಹೋಗಿ...
ಒಮ್ಮೆ ನನ್ನ ಕರೆಯಬಾರದೆ....
ಒಂದು ಆಸೆಯ ಹಿಡಿದು ತಂದು
ನಿನ್ನ ಮುಂದೆ ನಿಲ್ಲಲೇನು?
ಕಿರುಬೆರಳ ಬಿಗಿಹಿಡಿದು
ಮುಂದೆ ಮುಂದೆ ಸಾಗೋ ಇಚ್ಛೆಯೂ
ಆ ವಾರಿಧಿ ತಟದೊಳು
ಗೆಳತಿ,
ಬಿಚ್ಚಿಡು ಬಚ್ಚಿಟ್ಟ ಆ ಸವಿಮಾತುಗಳ
ತುಂಬುವೆನು ಕನಸಿನ ಕಂಗಳಿಗೆ ಕಾಂತಿಯನು.....

ಸೋಮವಾರ, ಅಕ್ಟೋಬರ್ 10, 2011

ನೀನಲ್ಲವೇ ಈ ಜೀವನದ ಅರ್ಥ .....!

ಪದಗಳ ಸೇರಿಸಿ
ಕವನ ಬರೆಯುವಾಸೆ ..
ಕದಗಳ ಸರಿಸಿ
ಜೀವನ ನೋಡುವಾಸೆ...
ಅಲ್ಲಿ ಅರ್ಥವಿರಬೇಕಂತೆ
ಇಲ್ಲಿ ನಿಶ್ವಾರ್ಥವಂತೆ
ಗೆಳತಿ..
ನನಗರ್ಥವಾಗುತ್ತಿಲ್ಲ
ಈ ಅರ್ಥ -ನಿಶ್ವಾರ್ಥಗಳು ....
ಯಾಕೆಂದರೆ...
ಎರಡಕ್ಕೂ ಜೊತೆಗಿದ್ದು
ನನಗರ್ಥ ತುಂಬಿದವಳು
ನೀನಲ್ಲವೇ....?

ಬುಧವಾರ, ಸೆಪ್ಟೆಂಬರ್ 21, 2011

ಗೆಳತಿ .


ಭಾವನೆಯ ಮೀಟಿ
ನೆನಪುಗಳ ದಾಟಿ
ಬಾಳ ಸುದೆಯಲ್ಲಿ
ತಂಗಾಳಿ ತಂಪಿರಲು
ನನ್ನ ಪಯಣ ಸಾಗಿದೆ
ನಿನ್ನ ದಡಕಡೆ ಬಾಗಿದೆ....
ಗೆಳತಿ....
ಕಣ್ಣು ಮುಚ್ಚಿರಲು
ಅಲ್ಲೊಂದು ಬೆಳಕು
ಅದರೊಳಗೆ ನಿನ್ನ
ಪ್ರತಿಬಿಂಬದ ತುಣುಕು ....
by,

raj..

ಶನಿವಾರ, ಸೆಪ್ಟೆಂಬರ್ 3, 2011

ಗೆಳತಿ ನೋಡಲ್ಲಿ...

ಹಿಮಕೋಟೆಯ ಭೇದಿಸಿ
ಭೂದೇವಿಯ ಚುಂಬಿಸಿ
ಜನಕೋಟಿಯ ಸ್ಪರ್ಶಿಸಿ
ಗೆಳತಿ
ನೋಡಲ್ಲಿ ಅಂಬರದಲ್ಲಿ
ರಾಶಿ ಕಿರಣದ ನರ್ತನ...
-
ರಾಜ್....

ಶುಕ್ರವಾರ, ಸೆಪ್ಟೆಂಬರ್ 2, 2011

ಗೆಳತಿ .....

ನೀರ ಹರಿವಿನ
ಪ್ರಾಣಿಪಕ್ಷಿಯ
ಪಂಚಭೂತದ
ಧ್ವನಿತರಂಗ..
ಸೆಳೆದುಬಿಟ್ಟಿತು
ನಾಟ್ಯ ಸರಸ್ವತಿಯ
ಸಂಗೀತಗಂಗೆಯ
ಅಂತರಂಗ..
ಮೀಟಿನಿಂತಿರಲು
ಭಾವಸುದೆಯನು
ಕುಣಿಸಬಲ್ಲುದು
ಹೆಜ್ಜೆಯನು..
ಗೆಳತಿ,
ರಾಗತಾಳದಲಿ
ಲಯದಿ ಕಥೆಯಿರಲು
ಧ್ವನಿಸಬಲ್ಲುದು
ಗೆಜ್ಜೆಯನು....
by,
raj..........

ಗುರುವಾರ, ಸೆಪ್ಟೆಂಬರ್ 1, 2011

ಕವಿಯಾಗು ಬಾ ಗೆಳತಿ .....

ಕವಿಯಾಗು ಬಾ ಗೆಳತಿ....
ಈ  ಹಚ್ಚಹಸುರಿನ
ಗಿರಿಕಾನನವ ಸುತ್ತಿರೆ..
ನವಿಲಾಗು ಬಾ ರತಿಯೇ ....
ಶೃಂಗಾರ ರಸದೊಳು
ಕೋಗಿಲೆಯು ಹಾಡಿರೆ ..
ಮಗುವಾಗು ಬಾ ಒಡತಿ
ನನ್ನ ಸಂಗಡ ನಿನ್ನ ಇರುವಿರೆ....
ಮತ್ಯಾರು ಹೇಳರು
ಈ ಮಾತ...!
ಯಾಕೆಂದರೆ
ಕವಿಯಲ್ಲದ ಜೀವಕೆ
ಎಲ್ಲವೂ ಒಂದೇ
ಪ್ರಾಣಿಪಕ್ಷಿಗಳಂತೆ.....!


ನಿನ್ನ
         ರಾಜ್.....

ಸೋಮವಾರ, ಜೂನ್ 6, 2011

ಗೆಳತಿ

ನದಿನಾರಿಯು ಉಟ್ಟ ಸಾರಿಯು
ಕೆಂಬಣ್ಣವಾದುಡೆ 
ಮುಂಗಾರುವಿನ ಆಗಮನ...
ವನಮಲ್ಲಿಗೆ ಅರಳಿ 
ಕಂಪು ಬೀರಿರೆ 
ದುಂಬಿಯ ಸವಿಗಾನ...
ಗೆಳತಿ,
ಹನಿಮಳೆಯ ಆ ತಂಗಾಳಿಯೊಳು
ನಿನ್ನ ಬರುವಿರೆ
ಅತ್ತಿತ್ತ ಚಲಿಸದು  
ನನ್ನ ಈ ಗಮನ......

ನಿನ್ನ ಸ್ನೇಹಿತ,
raj.... 

ಮಂಗಳವಾರ, ಮೇ 10, 2011

ಗೆಳತಿ....

taale gariya naadolu.....
ratna varniya bidireyali...
jaina kashiya gudiyaolu..
serisa barade nannanu.....
gelati..
manvantaragalu kaledaru..
manassu matra onde...
kanassu kuda onde
hrudaya bhavaneyu onde..
nanu neenu...matra bere bere...
ninna bala putadolu
nooraru nenapa bittiyu..
teredu swikarisu e manavanu
sneha sudeya e tanuvanu....

ಗೆಳತಿ....

ಚೆಲುವೆ ಕನಸು ಕಂಡರೇನು ಪ್ರಯೋಜನ
ಮನಸು ನೀಡದೆ...
ಒಲವೆ ಮುನಿಸು ಇದ್ದರೇನು ಸಂತಸ
ಸೊಗಸ ಕಾಣದೆ.....
ಅರಸಿ ಹೊರಡದಿರು ನಾಳೆಯನು
ಪ್ರೀತಿ ಚಿಲುಮೆಯ ಹೊತ್ತು ತರುವ
ಅರಸಬಾರದೆ.....
ಮೌನದೊಳು ಮೌನಿಯಾಗು
ಮೌನರಾಗಿನಿಯಂತೆ ....
by,
raj....

ಸೋಮವಾರ, ಮೇ 9, 2011

ಗೆಳತಿ....

ಸುಮ್ಮನಿಸದಿರು ಮನಸೇ
ನಾ ಮರೆಯಾದರು ಅದು ಕ್ಷಣಿಕ....
ಮಾತು ಕಳೆದಾಗ
ನೋವು ವ್ಯಥೆಯಾಗಿ
ಕಥೆಯಾಗಿ ರೂಪುಗೊಳುವುದೇ ಜೀವನ....
ನನಗರಿವಿರೆ ಗೆಳತಿ
ನೀ ಬೇರೆ ನಾ ಬೇರೆ ದಾರಿಯ ಹೂವುಚಿತ್ತಗಳು...
ನಾ ಎಷ್ಟು ಕಾದರು
ಆ ನಿನ್ನ ಮನಸು ನಿಲುವುದೇ ಸುಮ್ಮನೆ
ಹುಡುಕ ಬಯಸಿರೆ ಒಲವನು....
ನಿನ್ನ ಪಯಣದ ಹಾದಿಗೆ
ನನ್ನ ಪನ್ನೀರ ಸಿಂಚನ....
ಬಸವಲಿಯದಿರು ಕೊಡುವೆ ನೆರಳಿನ ಆಸರೆ.....
ನಿನ್ನ ಮೌನಕೆ ನಾ ಹಾಡುವೆ ಸ್ವರಗಳ....
ನನ್ನ ಜೊತೆಯಲೇ ದಶ ದಿಕ್ಕಿಗೆ
ಸಪ್ತ ರಾಗವು ಹೊಮ್ಮಿ ಬರಲಿ ನಿನ್ನೊಳು....
by,
nin preetiya snehita........kane
raj......

ಗೆಳತಿ....

ಭಾವನೆಯ ಮೀಟಿ
ನೆನಪುಗಳ ದಾಟಿ
ಬಾಳ ಸುದೆಯಲ್ಲಿ
ತಂಗಾಳಿ ತಂಪಿರಲು
ನನ್ನ ಪಯಣ ಸಾಗಿದೆ
ನಿನ್ನ ದಡಕಡೆ ಬಾಗಿದೆ....
ಗೆಳತಿ....
ಕಣ್ಣು ಮುಚ್ಚಿರಲು
ಅಲ್ಲೊಂದು ಬೆಳಕು
ಅದರೊಳಗೆ ನಿನ್ನ
ಪ್ರತಿಬಿಂಬದ ತುಣುಕು ....
by,
raj..