ಭಾನುವಾರ, ನವೆಂಬರ್ 11, 2012

ಗೆಳತಿ

ಹುಚ್ಚಂತೆ ಕುಣಿದು
ಒಲವಲ್ಲಿ ದಣಿದು
ಮನಸೀಗ ಕನಸ ಸಂತೆ
ನಿನಗಿಲ್ಲವೇಕೆ ಚಿಂತೆ

ಹೂವ ಚಿಗುರಂತೆ ಹುಟ್ಟಿ
ಭಾವ ಮಗುವಂತೆ ಕಟ್ಟಿ
ಪ್ರೀತಿ ಬದುಕನೀಗ
ಈ ರೀತಿ ಮರೆವೆನೇಗೆ

ಗೆಳತಿ

ಸರಿತಪ್ಪಿರಲಿ ಅಲ್ಲಿ
ನಾವು ಒಪ್ಪಿರಲು ಇಲ್ಲಿ
ಬೆಸೆಯಲು ಅನುಬಂಧ
ಹಸಮನೆಯ ಸಂಬಂಧ...

ಗೆಳತಿ

ಒಂದೆಸಳ ಹೂವಲ್ಲಿ
ಒಂದನಿಯು  ನೀನಾದೆ
ಹೊಂಬಿಸಿಲ ಕಾವಲ್ಲಿ
ಮೊದಲಸಲ ಮರೆಯಾದೆ
ಕೇಳೆನ್ನ ಜೀವ ನೀನು
ಬಾಳಿನ ಭಾವ ಜೇನು....

ಮತ್ತೆ ಸುಮವಾಗಿ
ಕಾಯುತ್ತಿರು ನನಗಾಗಿ
ಬರುವೆನು ಜೊತೆಗಾಗಿ
ನಾ ದುಂಬಿಯಾಗಿ
ನಿನ್ನ ಮುದ್ದಿಸಲು ಚೆಲುವೆ
ತಾಳಿ ಮಂತ್ರವ ತರುವೆ

ಸಿಂಗರಿಸಿ ಕಾಯವನು
ಹೂವಿಂದ ಕಾಯಿಯನು
ಹೆಣ್ಣೇ ಹಣ್ಣಾಗಿ
ಹಣ್ಣ ಕಾಯಿಯೂ ಮಣ್ಣಾಗಿ
ಮಣ್ಣಿಂದ ಜೀವದ ತಿರುಳಾಗಿ


ಹೇಳು ಇದಲ್ಲವೇ ಜೀವನ..
ನಮ್ಮಿ ಭಾವದ ಪಯಣ..

ಗೆಳತಿ....

ಮನಸಿಂದು ಮಗುವ ತರವೇ
ಕನಸಿಂದು ಯಾಕೆ ತರವೇ
ಬದುಕಿಂದು ಬರಿಯ ಬೊಗಸೆ
ನಿನ್ನ ಮೌನ ಮುರಿಯೆ ಸೊಗಸೇ
ಹೇಳು ಮನಸೇ ನೀನು
ಕನಸು ಬರಿಯ ಕನಸೇ...?

ಶುಕ್ರವಾರ, ಏಪ್ರಿಲ್ 27, 2012

ಕಾತರಿಕೆ

ತಂಗಾಳಿ ನನ್ನ
ಮೈಸೋಕಿದಾಗ
ಮನಸೆಲ್ಲ ಹಿತವಾಗಿದೆ....
ಬಂಗಾರ ಬಣ್ಣ
ಮರೆಯಾಗಿ ಸಂಜೆ
ಬೆಳದಿಂಗಳಲ್ಲೇ ಕುಣಿದಾಡಿದೆ....
ಶೃತಿಯಾಗಿ ಒಲವ
ದ್ವನಿಗಾಗಿ ನಿನ್ನ
ಪ್ರತಿ ಗಳಿಗೆ ನಾನು
ಕಾಯುವೆ..... 
ಮನವನ್ನೇ ಕೇಳಿ
ಕನಸನ್ನ ಕಟ್ಟಿ 
ನಮ್ಮ ಪ್ರೀತಿ ಬದುಕ
ತೆರೆದಿಡುವ ಮುನ್ನ
ಯಾಕಾದೆ ಮೌನ
ನೀ ಹರಿಸೆ ಗಮನ......

ಬುಧವಾರ, ಏಪ್ರಿಲ್ 25, 2012

ನೆನಪು

ಕೆಂಪಾದ ಸಂಜೆಯೊಳು
ತಂಪಾದ ತಂಗಾಳಿಗೆ ನಾಚುವ 
ತರಗೆಲೆಯಂತೆ
ಮೌನವ ಮುರಿಯಲು
ಮನವನು ದೋಚುವ 
ಒಳದನಿಯಂತೆ 
ದಾಹದಿ ಕರೆಯಲು 
ಭುವಿಯನು ತಣಿಯುವ 
 ಮಳೆ ಹನಿಯಂತೆ 
ಮತ್ತೆ ಮತ್ತೆ  ನೆನೆವು 
ಕನಸಾಗಿ ಚಿಗುರುತ್ತಿದೆ.....

 
 

ಬುಧವಾರ, ಏಪ್ರಿಲ್ 18, 2012

ಮನಸ್ಸು ಹಾರುವ ಹಕ್ಕಿ ಸಖಿ

ಅಕ್ಕರೆಯ ಬೀದಿಯೊಳು
ಸಕ್ಕರೆಯ ಕಾಣುವವರು
ಮನಸಿನ ನೂರು ಕಹಿಗೆ 
ಉತ್ತರವ ಕೊಳ್ಳುವರೆ
ಹೇಳೇ ........ ಸಖಿ

ಬರೆದಿಟ್ಟ ಹಣೆಬರಹದೊಳು
ಚಿತ್ತಾರವ ಹಣೆದವರ
ಬಿತ್ತರಿಸುವ ಕನಸುಗಳು
ನೀರಾಗದೇ ಉಳಿವುದೇ 
ಹೇಳೇ...... ಸಖಿ 

ನಾ ದೋಣಿ ತಲ್ಲಿರಲು
ಭೋರ್ಘರೆವ ಸುದೆಯು 
ತಣಿಯುತ್ತಿರಲು
ಬರುವೆಯ ಹೇಳೇ ...
ನನ್ನ ಸಖಿ..
ಮನದ ಮುಖಿ..     

 

ಬುಧವಾರ, ಮಾರ್ಚ್ 7, 2012

ವಿಶ್ವ ಜಾಗೃತಿಯ ಹೆಣ್ಣಿನ ದ್ವನಿಯ ಪ್ರತಿಬಿಂಬ ಈ ದಿನ. ನನ್ನ ಎಲ್ಲ ಸ್ನೇಹಿತ ಹಾಗು ಹಿತೈಷಿ  ಹೃದಯಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ಕರುಣೆ, ವಾತ್ಸಲ್ಯ, ಮಮತೆ, ಪ್ರೀತಿ, ಸ್ನೇಹ, ಬಂಧುತ್ವ ಇವು ಹೆಣ್ಣು ಮಾನವ ಜಗತ್ತಿಗೆ ತೆರೆದಿಟ್ಟ ಜೀವನ ಸತ್ಯಗಳು. ಈ ಔಧರ್ಯಗಳೇ ನೆನೆವುಗಳ ಸತ್ವಗಳು.... ಕೋಟಿ ಕೋಟಿ ಮಾತೃ ಹೃದಯಕ್ಕಿದೋ ಪ್ರೀತಿ ಪೂರ್ಣ ವಂದನೆಗಳು.....

ಶನಿವಾರ, ಮಾರ್ಚ್ 3, 2012

ಎಡರು ತೊಡರು



ನೀ ಎಡವಿಕೊಳಲು
ಏದುಸಿರ ಕರೆಗೆ 
ನಾನಲ್ಲಿರುವೆ
ಒಲವ ಕೈ ಹಿಡಿದು ಸಂಗಾತಿ..

ನಾ ಕಲ್ಲ ಹಾದಿಯಲಿ
ಬರಿಗಾಲ ಪಯಣದೊಲಿರೆ
ನೀನೆಲ್ಲಿರುವೆ
ಬರಿಯ ನೆನಪಲ್ಲವೇ ಗೆಳತಿ

ನಿನ್ನ ಹೆಜ್ಜೆ ಗುರುತಾ ಪಡೆದು
ಆಸೆಗಳ ಸೆರೆಯಿಡಿವ
ಕನಸುಗಾರನೆಂದ ನೀನು...
ನನ್ನ ಹೃದಯದೊಳಗೆ ನಿನ್ನ 
ಮಗುವಿನಂತೆ ಮಲಗಿಸೋ ಮುನ್ನ
ಗೂಡು ಕಟ್ಟುವೆನೆಂದೆ ನಾನು..

ಮಣ್ಣ ಹಿಡಿದು ಮುಷ್ಟಿಯೊಳಗೆ
ನಿನ್ನ ಮುಂದೆ ಮಾಡಿರೊ ಆಣೆ
ಮರೆತು ಹೋಗಿದೆ ಈ ಮುಂಜಾನೆ
ಮತ್ತೆ ನೆನೆಯದೆ ಆ ಸಂಜೆಯೊಳಗೆ
ನಿನ್ನ ಶಾಲು ಬರೆದ ಕವಿತೆ
ಅದರೊಳಗೆ ನೀನೆ ಅವಿತೆ


ನನ್ನ ಕಾಯ ತೆರೆದು ಒಲವಲಿ
ನಿನ್ನ ಹೃದಯ ತೋರಿಸೊ ವೇಳೆಗೆ
ಮೌನಗೀತೆಯ ಹಣೆದು ನೀನು
ಕೈಯ ನೀಡಿದೆ ಬಣ್ಣದ ಬಳೆಗೆ
ಹೊಸ ಬದುಕಿಗೆ ಬರೆಯೋ ಮುನ್ನುಡಿ
ಈ ಜೀವಕೆ ನೀನಾದೆ ನೆನಪ ಕನ್ನಡಿ

ಸೋಮವಾರ, ಫೆಬ್ರವರಿ 13, 2012

ಜಾನಪದ ಸೊಗಡಿನಲ್ಲಿ ಗೆಳತಿಯ ನೆನಪು......

ನಾ ಕಲಿತ ವಿದ್ಯಾಲಯ ನೋಡ ಬಂದೆ
ನಿನ್ನ ನೆನಪಾಗಿ ಅಲ್ಲಲ್ಲಿ ನಿಂದೆ
ಆ ಹುಲ್ಲಲ್ಲೇ ಮನ ಮಾಡಿಕೊಂಡೆ
ಹೆಜ್ಜೆ ಕಂಡಂತೆ ನನಗಂತೋ ಚಿಂತೆ
ಹೆಜ್ಜೆ ಕಂಡಂತೆ ನನಗಂತೋ ಚಿಂತೆ
ಓ ಓ ಓ ......

                                   ನಾವಿಬ್ಬರು ಪ್ರೀತಿಸೆ ಮನಸಾರೆ
                                   ಕಳೆದೋದ ದಿನಗಳ ಪೂರ್ಣತಾರೆ
                                   ನೋವಲ್ಲೆ ಮನೆಮಾಡಿ ಕಣ್ಣಧಾರೆ
                                   ನಿನ್ನ ನೆನಪ ನಾ ಮರೆಯಲಾರೆ
                                   ನಿನ್ನ ನೆನಪ ನಾ ಮರೆಯಲಾರೆ

ಅಅ ಅಅ ಅಅ ......
ಯಾಕೋ ಬರಲಿಲ್ಲ ಅಂದು ಇಳೆಗೆ ಮಳೆ
ಈಗ್ಯಾಕೆ ನಿರಂತರ ಈ ಸುರಿಮಳೆ
ಒಲವಲ್ಲಿ ನೀರನ್ನು ನಿನ್ನ ಶಾಲಲ್ಲೇ ಹಿಡಿದಿಟ್ಟ ಆ ಕ್ಷಣ
ಇಂತಿರುಗಿ ನೋಡಿದರೆ ನಿನ್ನ ಸುಳಿವಿಲ್ಲ ಈ ಕ್ಷಣ
ಇಂತಿರುಗಿ ನೋಡಿದರೆ ನಿನ್ನ ಸುಳಿವಿಲ್ಲ.....
                                     

                                      ಕೂಗಿದೆನು ನಿನ್ನನ್ನು ನಿದಿರೆಯಿಂದ ತಡಎದ್ದು
                                      ಹುಡುಕಿದರೆ ನಿನ್ನ ಧನಿಯಿಲ್ಲ ಸುತ್ತಲಲಿ
                                      ಬೆಳಕಿಲ್ಲದೆ ಮುಳುಗಿದೆನು ಕತ್ತಲಲಿ
                                      ಯಾರೋ ದೀಪವ ತರದ ಕೋಣೆಯೊಳು
                                       ಯಾರೋ ದೀಪವ ತರದ ಕೋಣೆಯೊಳು ........

ಶುಕ್ರವಾರ, ಜನವರಿ 13, 2012

ಪ್ರೀತಿ....ವಾತ್ಸಲ್ಯ ..ಭರವಸೆ ...

ನನ್ನ ಪ್ರೀತಿಯ ದೇಗುಲದೊಳು
ಮೂರು ದೇವರ ಮೂರ್ತಿಗಳು..
ನಿಮ್ಮ ಒಲವಿನ ಧಾರೆಯಲಿ
ನನ್ನ ಕನಸಿನ ಕೀರ್ತಿಗಳು...

ಅಮ್ಮನೆದುರಲಿ ನಿಂತರೆ
ಅವಳ ಕಣ್ತುಂಬ ವಾತ್ಸಲ್ಯವನು
ನೋಡುವಾಸೆ.....
ಅಪ್ಪನೆದುರಲಿ ಸರಿದರೆ
ಕರೆಸಿ ಕಿವಿಮಾತುಗಳ
ಹೇಳಿಸುವಾಸೆ.....
ನನ್ನ ಪ್ರೀತಿಯ ಜೊತೆಯಲಿರೆ
ಮನತುಂಬಿ ಅವಳ ಭಾಷೆಯಲ್ಲೇ
ಕರೆಸಿಕೊಳ್ಳುವ ಆಸೆ...

ಕೈಮುಗಿವೆ....
ಮರೆಯದಿರೆನ್ನನು...
ಪ್ರತಿ ಕ್ಷಣವೋ...
ನೆನೆಯುವೆ ನಿಮ್ಮನು..
ಕ್ಷಣ ಕ್ಷಣವೂ...