ಗುರುವಾರ, ನವೆಂಬರ್ 1, 2018

ಜೀವನದ ಸುಡುಬಿಸಿಲಿನೊಳು
ಪ್ರೀತಿ ಒರತೆಯಾಗಿ
ಬದುಕ ತುಂಬಿದೆ ನೀನು
ನಾವಿಬ್ಬರೂ ಹಣೆದ ಖುಷಿಯು
ಮಳೆಹನಿಯಾಗಿ
ತಂಪೆರಗುತಿರೆ
ಬಿರುಗಾಳಿ ಎಬ್ಬಿಸಿದ
ಕಾರ್ಮೋಡ ಒಡೆಯುತಿವೆ
ಸಿಡಿಲ ಆರ್ಭಟದೊಳು
ತಿಳಿಯುತಿಲ್ಲ ಹೊಳೆಯುತಿಲ್ಲ
ಭುವಿಗೆ ಭಾರವಾಗಿದೆ
ಕಣ್ಣು ಕಾಣದೆ ದೋಣಿ
ಈಜು ಕಲಿಯದೆ
ಮುಳುಗುತಿವೆ
ಬಚ್ಚಿಟ್ಟ ಕನಸುಗಳೆಲ್ಲವು..

ಶನಿವಾರ, ಮೇ 5, 2018

ಒಲುಮೆಯ ಉತ್ತರ

ಜೀವನ ಕವಿತೆ ಬರೆದ ಸಾಲು
ಉದುರುತಿದೆ ಓ ಜೀವದ ಗೆಳತಿ
ಪ್ರೀತಿಯು ನೋವಿಗೂ ಮಿಗಿಲು
ಕೈಯನು ಬಿಗಿದಿಡುವೆ ನನ್ನೊಡತಿ
ಪೋಣಿಸೆ ಬಾ ನೀ ಜೊತೆಯಾಗಿ
ಇರುವೆನು ಬದುಕಲಿ ನೆರಳಾಗಿ..

               ಕಾಣುವ ರಾತ್ರಿಯು ಸುಂದರ ತಾನೆ
               ಮಿನುಗುವ ನಕ್ಷತ್ರ ಸುಡುತಿವೆ ತನ್ನೆ
               ನಿಜದಲ್ಲಿವುದು ಶಾಶ್ವತ ನಮಗೆ
               ಕಲ್ಪನೆ ಕರಗಿದ ನೋವೆ ಕೊನೆಗೆ
               ಎದೆಗೊರಗಿಸುವೆನು ಬಾಳಲಿ ನನ್ನ
               ಮರೆತುಬಿಡು ನೀ ಈ ಜಗವನ್ನ

ಕಣ್ಣಿನ ನಡುವೆ ನಲ್ಮೆಯ ನಗುವೆ
ಗೀಚಿದ ಸಾಲಿಗೆ ಪದಗಳೆ ಮಗುವೆ
ಸೇರಿಸೆ ಖುಷಿಯನು ಎಲ್ಲವು ಸರಿಯೆ
ನೀನೆ ಬರೆದ ಒಲವಿನ ಗರಿಯೆ
ತುಂಬಿದೆ ಭಾವಕ್ಕೆ ಪದಗಳ ಸರಿಗಮ
ನೀಡಬೇಕಿದೆ ನಾವು ಸಂತಸದ ವಿರಾಮ

ಶುಕ್ರವಾರ, ಮೇ 4, 2018

ಕಾತರದ ನಗು

ಕಿರುನಗೆಯ ಕವಿತೆಯನು
ಸುಡುಬಿಸಿಲು ಕಸಿಯುತ್ತಿದೆ
ಮಳೆಹನಿಯ ಸುಖಬರಲಿ
ಮಂದಹಾಸವನು ತುಂಬಿ
ಕಾದಿಹೆನು ನಿನಗಾಗಿ
ಚೆಲುವ ದಿನಗಳಿಗಾಗಿ

ಸೋಮವಾರ, ಮಾರ್ಚ್ 26, 2018

ಬಳಿ ಸರಿದಾಗ ನೀನು

ಕಾಲ್ಗೆಜ್ಜೆ ನಿನ್ನ ಕರೆದಿವುದೆನ್ನ
ಹೃದಯಾ..ನ್ನ
ಹರಿ ಬಿಟ್ಟ ಮಲ್ಲಿಗೆ ಕಾಡಿವುದೆನ್ನ
ಜೀವವ..ನ್ನ
ಮುಂಗುರುಳ ಹುಡುಗಿ
ತಂಗಾಳಿಯಲ್ಲಿ ತೇಲೋದೆ ನಾ..
ನಿನ್ನಂದವನ್ನು ಕಣ್ತುಂಬಿದಂತೆ
ನಿನ್ನವನಾದೆ ನಾ..

ಚೆಲುವೆ ಹಿಂದಿರುಗಿ ನಗದಿರು
ಮನಸೆಲ್ಲಾ ಕರಗಿ ಸುದೆಯಾಗಿದೆ
ಕನಸೆಲ್ಲಾ ಆಕಾಶದಲ್ಲಾರಾಡಿದೆ
ಒಲವ ಹಣೆ ಬರಹ ಸರಿದರು
ಕ್ಷಣವೆಲ್ಲಾ ನೀರಾಗಿ ಹರಿದಾಗಿದೆ
ಬದುಕೆಲ್ಲಾ ನಿನಗಾಗಿ ಮುಡಿಪಾಗಿದೆ

ಮಳೆಯೆ ಬಂದೆರಗಿ ಸುರಿದಂತೆ
ಸುಳಿಗಾಳಿ ದೂಡಿ ತಂಪಾಗಿದೆ
ಭುವಿಯೆಲ್ಲ ಹಸಿರಾದ ಈ ತಲ್ಲಣ
ನಾಳೆಯೆ ನಮಗಾಗಿ ಬಂದಂತೆ
ಬಳಿಯೆಲ್ಲ ಕಾಡಿ ಇಂಪಾಗಿದೆ
ನಿನ್ನಿಂದ ನವಿರಾದ ಈ ಸಿಂಚನ