ಶುಕ್ರವಾರ, ಜನವರಿ 11, 2013

 ಗೆಳತಿ...



ಈ ಬೆಳದಿಂಗಳ ಬೆಳಕೊಳಗೆ
ನೆನಪಾದೆ ಬೆಳ್ಳಕ್ಕಿ
ಸಂಚಾರದಂತೆ..
ಮನದಂಗಳದ ಕನಸೊಳಗೆ
ಸಾಗುತ್ತಿರುವೆ  ಪಲ್ಲಕ್ಕಿ
ಮೆರವಣಿಗೆಯಂತೆ..
 ಹುಚ್ಚು ಹೃದಯ ಕಣೆ ಇದು
ಅತಿಯಾಗಿ ಪ್ರೀತಿಸಿದೆ..
ಗೆಳತಿ ಈಗ ಹೇಳು
ನಿನ್ನ ಬಾಲಪುಸ್ತಕಕ್ಕೆ
ನಾನೇ ಸಂಗಾತಿಯಾಗಬಾರದೇಕೆ..?

ಸೋಮವಾರ, ಜನವರಿ 7, 2013

 ಗೆಳತಿ 


ಕಣ್ಣ ಮುಚ್ಚುವ ಮೊದಲೇ
ಕನವರಿಸಿಕೋ ನಿನ್ನ ಇಷ್ಟವನು
ಸುಮ್ನೆ ಮಲಗಿದ ಮೇಲೆ 
ತಂದ್ಕೊಬೇಡ
ಕೆಟ್ಟ ಕನಸಿನ ಕಷ್ಟವನು .....