ನನ್ನ ಪ್ರೀತಿಯ ಸ್ನೇಹಿತರೆ.... ಮುಂದಿನ ವಿ.ವಿ. ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಗೆಳತಿ ಕವನಗಳನ್ನು ಒಂದು ಹಂತದ ಅಲ್ಪವಿರಾಮದೊಂದಿಗೆ, ನಿಮ್ ಮುಂದೆ ಬಿಡಿಯಾಗಿ ಕಾವ್ಯ ಪರದೆಯಲಿ, ಸಂದೇಶಗಳಲ್ಲಿ ಸತತವಾಗಿ ೬ ವರ್ಷದಿಂದ ಅಕ್ಷರ ರೂಪದಲ್ಲಿ ಹರಿದಾಡಿದ್ದು... ಗೆಳತಿ ಕವನಸಂಕಲನವಾಗಿ ತೆರದು ನಿಮ್ಮ ಮುಂದಿಡಬೇಕೆನಿಸಿದೆ....
ಶುಕ್ರವಾರ, ಜನವರಿ 11, 2013
ಗೆಳತಿ...
ಈ ಬೆಳದಿಂಗಳ ಬೆಳಕೊಳಗೆ
ನೆನಪಾದೆ ಬೆಳ್ಳಕ್ಕಿ
ಸಂಚಾರದಂತೆ..
ಮನದಂಗಳದ ಕನಸೊಳಗೆ
ಸಾಗುತ್ತಿರುವೆ ಪಲ್ಲಕ್ಕಿ
ಮೆರವಣಿಗೆಯಂತೆ..
ಹುಚ್ಚು ಹೃದಯ ಕಣೆ ಇದು
ಅತಿಯಾಗಿ ಪ್ರೀತಿಸಿದೆ..
ಗೆಳತಿ ಈಗ ಹೇಳು
ನಿನ್ನ ಬಾಲಪುಸ್ತಕಕ್ಕೆ
ನಾನೇ ಸಂಗಾತಿಯಾಗಬಾರದೇಕೆ..?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ