ಜೀವನ ಕವಿತೆ ಬರೆದ ಸಾಲು
ಉದುರುತಿದೆ ಓ ಜೀವದ ಗೆಳತಿ
ಪ್ರೀತಿಯು ನೋವಿಗೂ ಮಿಗಿಲು
ಕೈಯನು ಬಿಗಿದಿಡುವೆ ನನ್ನೊಡತಿ
ಪೋಣಿಸೆ ಬಾ ನೀ ಜೊತೆಯಾಗಿ
ಇರುವೆನು ಬದುಕಲಿ ನೆರಳಾಗಿ..
ಕಾಣುವ ರಾತ್ರಿಯು ಸುಂದರ ತಾನೆ
ಮಿನುಗುವ ನಕ್ಷತ್ರ ಸುಡುತಿವೆ ತನ್ನೆ
ನಿಜದಲ್ಲಿವುದು ಶಾಶ್ವತ ನಮಗೆ
ಕಲ್ಪನೆ ಕರಗಿದ ನೋವೆ ಕೊನೆಗೆ
ಎದೆಗೊರಗಿಸುವೆನು ಬಾಳಲಿ ನನ್ನ
ಮರೆತುಬಿಡು ನೀ ಈ ಜಗವನ್ನ
ಕಣ್ಣಿನ ನಡುವೆ ನಲ್ಮೆಯ ನಗುವೆ
ಗೀಚಿದ ಸಾಲಿಗೆ ಪದಗಳೆ ಮಗುವೆ
ಸೇರಿಸೆ ಖುಷಿಯನು ಎಲ್ಲವು ಸರಿಯೆ
ನೀನೆ ಬರೆದ ಒಲವಿನ ಗರಿಯೆ
ತುಂಬಿದೆ ಭಾವಕ್ಕೆ ಪದಗಳ ಸರಿಗಮ
ನೀಡಬೇಕಿದೆ ನಾವು ಸಂತಸದ ವಿರಾಮ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ