ರವಿಕಾಂತಿಯ ತಡೆವ ಮೋಡ
ಹೊತ್ತು ತಂದಿವೆ ನೋಡ
ಗಾಳಿ ನಿನ್ನೆಡೆಗೆ ದೂಕಲು
ಮಳೆಹನಿಯು ಜೀವನಕ್ಕೆ
ಅದೃಷ್ಟವಾಗುವುದೇಳು
ಕಾದು ಕುಳಿತ ನಿನ್ನ
ಅದೃಶ್ಯ ಬಯಕೆಗಳು
ಪುಟಿದೇಳುವುದೇನು..
ಆಕಾಶಕ್ಕೆಲ್ಲ ಬೆಳ್ಳಕ್ಕಿ
ಚಪ್ಪರವ ಹಾಕಿದೊಡ
ಮನೆ ಮುಂದೆ ಪಲ್ಲಕ್ಕಿ
ಒಯ್ಯುವ ಸಂಭ್ರಮವಿರೆ
ಹನಿ ನೀರ ಸಿಂಚನದಲಿ
ಹಸಿರ ತಳಿರು ತೋರಣವು
ನಗುವಿನಲೆ ಸ್ವಗತವನೀವ
ಬಾಳ ಹೊಸತನವಿದು
ಕರಗುತಿದೆ ನಾಚಿಕೆಯ ಮೊಗವು
ನಿನ್ನ ಬೆರಳುಗಳ ಬಿಗಿದು
ಬಿಸಿ ಹೋಮದಲಿ ಕಸಿವಿಸಿ
ಸುತ್ತುತಾ ಸುತ್ತಿಕೊಳ್ಳುತ್ತಿವೆ
ನಲ್ಲನೆನ್ನುತ ಸಪ್ತಪದಿಯಲಿ
ಎಲ್ಲ ನಿನ್ನವೆ ಎಲ್ಲ ನನ್ನವೆ
ಹರುಷವಿದೆ ವರುಷ ತುಂಬಿದೆ
ನೀನೆಳುತಿರುವೆ ಕೇಳು...
ಹರಿವ ನೀರಲಿ ಜಾರಿದ ಋಣದಂತೆ
ನಿನ್ನ ಬಿಗಿದಪ್ಪಿವೆ ಕನಸುಗಳು
ಮರೆಯದಿರು ತೊರೆಯದಿರು
ನೀ ನಿತ್ತ ಭಾಷೆಯನು
ನನ್ನಕಾವ ನಮಗಾವ ಜೀವಗಳು
ನಿನ್ನವು ಅದೇ ನಿನ್ನ ಜೀವನವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ