ನಿನ್ನ ಭಾವದ ನೆರಳು
ಬೀಳುತಿದೆ ಎನ್ನ
ಹೃದಯದ ಬಾಗಿಲಿಗೆ
ಎನ್ನ ಮನದ ಮರುಳು
ಕೇಳುತಿದೆ ನಿನ್ನ
ಬರಲಾರೆಯ ಒಳಗೆ
ಗೆಳತಿ ನನ್ನೆದೆಯೊಳಗೆ..
ಜೀವದಾರತಿಯನು ಉರಿಸಿ
ಕಾಡುವ ಕಷ್ಟಗಳನು
ಪ್ರೀತಿಯಿಂದಲೆ ಸರಿಸಿ
ಸ್ವೀಕರಿಸುವೆನು ಒಲವೆ
ಜೀವ ಬಂಧನಕೆ
ಬಾಗಿಸೆಯ ಕೊರಳನು
ಗೆಳತಿ ನವಜೀವನದೊಳಗೆ..
ಸಂಭ್ರಮವು ಬೇಕಿಲ್ಲ
ಮಂತ್ರಘೋಷಗಳು ಇಲ್ಲ
ಪ್ರೇಮದಾಲಾಪನೆಯೆ ನಮಗೆಲ್ಲ
ಒಪ್ಪಿಬಿಡುವೆಯ ಹೇಳು
ಕಟ್ಟಿಕೊಳ್ಳುವ ಕನಸನ್ನು
ನಮ್ಮಿಬ್ಬರ ಆರಮನೆಯಲ್ಲಿ
ಗೆಳತಿ ಹೃದಯದ ಅರಮನೆಯೊಳಗೆ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ