ಸೋಮವಾರ, ಮಾರ್ಚ್ 26, 2018

ಬಳಿ ಸರಿದಾಗ ನೀನು

ಕಾಲ್ಗೆಜ್ಜೆ ನಿನ್ನ ಕರೆದಿವುದೆನ್ನ
ಹೃದಯಾ..ನ್ನ
ಹರಿ ಬಿಟ್ಟ ಮಲ್ಲಿಗೆ ಕಾಡಿವುದೆನ್ನ
ಜೀವವ..ನ್ನ
ಮುಂಗುರುಳ ಹುಡುಗಿ
ತಂಗಾಳಿಯಲ್ಲಿ ತೇಲೋದೆ ನಾ..
ನಿನ್ನಂದವನ್ನು ಕಣ್ತುಂಬಿದಂತೆ
ನಿನ್ನವನಾದೆ ನಾ..

ಚೆಲುವೆ ಹಿಂದಿರುಗಿ ನಗದಿರು
ಮನಸೆಲ್ಲಾ ಕರಗಿ ಸುದೆಯಾಗಿದೆ
ಕನಸೆಲ್ಲಾ ಆಕಾಶದಲ್ಲಾರಾಡಿದೆ
ಒಲವ ಹಣೆ ಬರಹ ಸರಿದರು
ಕ್ಷಣವೆಲ್ಲಾ ನೀರಾಗಿ ಹರಿದಾಗಿದೆ
ಬದುಕೆಲ್ಲಾ ನಿನಗಾಗಿ ಮುಡಿಪಾಗಿದೆ

ಮಳೆಯೆ ಬಂದೆರಗಿ ಸುರಿದಂತೆ
ಸುಳಿಗಾಳಿ ದೂಡಿ ತಂಪಾಗಿದೆ
ಭುವಿಯೆಲ್ಲ ಹಸಿರಾದ ಈ ತಲ್ಲಣ
ನಾಳೆಯೆ ನಮಗಾಗಿ ಬಂದಂತೆ
ಬಳಿಯೆಲ್ಲ ಕಾಡಿ ಇಂಪಾಗಿದೆ
ನಿನ್ನಿಂದ ನವಿರಾದ ಈ ಸಿಂಚನ

ಭಾನುವಾರ, ಜುಲೈ 2, 2017

ಕನವರಿಕೆ ಸಾಕಿನ್ನು
ನನ್ನ ಜೊತೆಗೆ ಬೇಕಿನ್ನು
ಬದುಕಿನ ಛಲವೊಂದ್ದಿದ್ದರೆ
ಹೂವು ಮುಳ್ಳುಗಳಾದರೇನು..

ಪ್ರೀತಿಸುವ ಮನದಲ್ಲಿ
ಚಿತ್ರಿಸಿದ ನಿನ್ನಲ್ಲಿ
ಸೊಗಸಾದ ಮಾತೊಂದ್ದಿದ್ದರೆ
ಹಣವು ಹೆಮ್ಮರವೇರಿದರೇನು..

ಬದುಕ ಹೆಣೆಯುವ
ಕೌಶಲ್ಯ ನಾನಾದರೆ
ಹರಿದ ನೆನಪುಗಳಿಗೆ
ನೀನೆ ಕೊನೆಯಲ್ಲವೇನು...

ಗುರುವಾರ, ಜೂನ್ 29, 2017

ಕಡಲ ತಡಿಯೊಳು
ನಿನ್ನೆಸರ ಬರೆದೆ
ಒಡಲ ಗೋಡೆಯಲಿ
ನಿನ್ನ ಪ್ರತಿಮೆ ತೆರೆದೆ...
ಬಣ್ಣ ಹಚ್ಚಲು ಬೇಕು
ಕೈ ಹಿಡಿದು ಸಾಗಬಲ್ಲೆಯೇನು..

ಮಂಗಳವಾರ, ಏಪ್ರಿಲ್ 2, 2013

ಕಂಗಳ ಕಾಂತಿಯಲ್ಲಿ 
ಭೂ-ರಮೆಯ ಸೌಂದರ್ಯ
ಕನಸುಗಳ ಆಗಸದಲ್ಲಿ 
ನನಸುಗಳ ಆಕಾರ 
ಬಣ್ಣ ಬಣ್ಣಗಳ ಚಿತ್ತಾರ 
ನಡುನಡುವೆ ಕಿವಿಗಿಂಪು 
ನೀಡುವ ಮಧುರಧ್ವನಿ 

ಆ ಹಕ್ಕಿಯ ಹಿಡಿಯ ಹೋದ ಮನಸ್ಸು 
ಮೋಹದಿಳೆಯಲ್ಲಿ ಬಳಿ ಸರಿದರೆ 
ನಗು ನಗುತ್ತಲೆ ದೂರ ಸರಿಯಿತು
ನೆನಪುಗಳಾಗಿ.. 
ಭಾರ ಹರಿಯಿತು ಮಳೆಹನಿಗಳಾಗಿ...
ಗೆಳೆತಿ  ನೀ ಕಟ್ಟುವ ಕನಸಿಗೆ
 ನಾನೇ ಸ್ಪೂರ್ತಿಯಾದರೆ.. 
ಒಲವ ನಾನಿಟ್ಟಿರುವೆ 
ನಿನ್ನ ಪ್ರೀತಿ ಪಂಚಾಂಗ ಕಲ್ಲುಗಳಲಿ...

  ಬೆಲೆಯಿಲ್ಲದ  ನೆಲೆ 




ಕನಸ ಮಾರುವೆನು
ಕೊಳ್ಳುವವರಿರೆ
ಮನಸು ಜಾರದಿರಲಿ  
ಅಗ್ಗ ಬೆಲೆಯಲಿ 
ಕೊಂಬ ಹಠ ಮಾಡೊ 
 ಜನರ ಸಂತೆಯಲಿ... 


ಕನಸು ಉಚಿತವಲ್ಲ 
 ಕಾಣೋ ಮನಸು ಖಚಿತವಾದೊಡೆ 
ಪ್ರೀತಿಗೆ ಬೆಲೆಯಲ್ಲಿ 
ಅಳತೆ ಮಾಡೋರು ಯಾರು?... 

ಅಜ್ಜಿ ಒಟ್ಟು ಮಾಡಿರೊ 
ನಾಲ್ಕಾಣೆ ರಾಶಿಯ ಬೆಲೆ 
ಶ್ರೀಮಂತ ಬಿಕರಿಯಲ್ಲಿ
ಚೆಲ್ಲೂ ಕಾಶಿಗಿಂತ ರುಚಿತಾನೆ..?

ಮಂಗಳವಾರ, ಮಾರ್ಚ್ 5, 2013

 ನೆನಪ ಹನಿ 


ಮುಂಜಾವಿನಲಿ ಹಸಿರೆಲೆಯೊಳು
ಸುರಿವ ಹನಿ ಭಾರಕ್ಕೆ 
ನೆನಪ ಬಿಂದುಗಳು
ಜಾರುತ್ತಿರುವೆ ಗೆಳತಿ.... 
ಮಂಜಾಗುತ್ತಿರುವ ಮನಸ್ಸು
ಕಣ್ಣ ಹನಿಯೊಂದಿಗೆ ಕರಗುತ್ತಿದೆ 
ಎಳೆಬಿಸಿಲ ಕಾಲ ದುಃಖಕ್ಕೆ...