ಭಾನುವಾರ, ಜನವರಿ 19, 2020

ನೀನಿರದ ಗಳಿಗೆ
ಜ್ವರವು ನನ್ನಾವರಿಸಿದಂತೆ
ನೀನೆದುರಾದಾಗ
ನೀರೊಂದಿಗಿಳಿದ ಗುಳಿಗೆ
ಜೊತೆಗಿದ್ದರೆ ಸದಾ ನೀನು
ಖುಷಿಯಿಂದಿರುವೆ ನಾನು

ಬುಧವಾರ, ಜನವರಿ 8, 2020

ನಿನ್ನ ಭಾವದ ನೆರಳು
ಬೀಳುತಿದೆ ಎನ್ನ 
ಹೃದಯದ ಬಾಗಿಲಿಗೆ 
ಎನ್ನ ಮನದ ಮರುಳು
ಕೇಳುತಿದೆ ನಿನ್ನ 
ಬರಲಾರೆಯ ಒಳಗೆ
ಗೆಳತಿ ನನ್ನೆದೆಯೊಳಗೆ..

ಜೀವದಾರತಿಯನು ಉರಿಸಿ
ಕಾಡುವ ಕಷ್ಟಗಳನು
ಪ್ರೀತಿಯಿಂದಲೆ ಸರಿಸಿ
ಸ್ವೀಕರಿಸುವೆನು ಒಲವೆ
ಜೀವ ಬಂಧನಕೆ
ಬಾಗಿಸೆಯ ಕೊರಳನು
ಗೆಳತಿ ನವಜೀವನದೊಳಗೆ..

ಸಂಭ್ರಮವು ಬೇಕಿಲ್ಲ
ಮಂತ್ರಘೋಷಗಳು ಇಲ್ಲ
ಪ್ರೇಮದಾಲಾಪನೆಯೆ ನಮಗೆಲ್ಲ
ಒಪ್ಪಿಬಿಡುವೆಯ ಹೇಳು
ಕಟ್ಟಿಕೊಳ್ಳುವ ಕನಸನ್ನು
ನಮ್ಮಿಬ್ಬರ ಆರಮನೆಯಲ್ಲಿ 
ಗೆಳತಿ ಹೃದಯದ ಅರಮನೆಯೊಳಗೆ..

ಸೋಮವಾರ, ಜನವರಿ 6, 2020

ಯಾವ ಜನಮಂದಿಯಿಲ್ಲವೊ
ವಾರಿಧಿ ತಟದೊಳು
ಅಲ್ಲೆ ನಿನ್ನೊಂದಿಗೆ ಕಳೆವೆನು
ನನ್ನ ಸಮಯವನು
ಸದ್ದುಗದ್ದಲವಿಲ್ಲದ ಕಾನನ
ಹರಿವ ಜಲರಾಶಿ ಪಕ್ಕ
ನಡುವೆ ಗುಡಿಸಲಿರೆ
ನಿನ್ನೊಂದಿಗೆ ಬದುಕ ಕಟ್ಟುವೆನು..
ಗೆಳತಿ
ಈ ಊರು ಪರವೂರು ಬೇಡ
ನಂಬಿ ಬದುಕುವ 
ನಮ್ಮಿಬ್ಬರ ಮನಸುಗಳಿರೆ
ಧರಿತ್ರಿಯ ಹಸಿರೊಳು
ಪ್ರೀತಿ ಹಂಚುತಾ ಬಾಳೋಣ..

ಭಾನುವಾರ, ಜನವರಿ 5, 2020

ಓದು ಬಾ
ಓಡಿ ಬಾ
ಶಾಲೆಗೆ..
ಉತ್ತಿರ್ಣನಾಗಿ
ಭವಿಷ್ಯ ತಾ
ನಾಳೆಗೆ..
ಇಳಿಸಂಜೆಯ ಬಾನಲಿ
ತೇಳಾಡಿದೆ ಮನ
ಪಶ್ಚಿಮದ ಗಾಳಿಗೆ
ಮೈಯೊಡ್ಡುತಾ
ಅರುಣವರ್ಣವು ಚಾಚಿದೆ
ನೀಲಕಾಶವನು
ವರುಣನಿಲ್ಲದ ಮುದವು
ತನುವ ತುಂಬಿದೆ..

ಹಕ್ಕಿ ಗೂಡುಗಳ ಅರಸಿರಲು
ತನ್ನವರ ಸೇರಲು
ಧ್ವನಿಯಾಗಿದೆ ಸಂಧ್ಯರಾಗ
ಭಾವ ಮೀಟಲು
ಇಂಪಾಗಿದೆ ತಂಪಾಗಿದೆ
ಮರೆಯಲಾರೆನು
ಈ ಸಂಜೆಯನು
ಸಂಗಾತಿ ಜತೆ ಹೆಜ್ಜೆಯನು..

ಸೋಮವಾರ, ಡಿಸೆಂಬರ್ 16, 2019

ಮನ ತುಂಬಿದ ಭಾವದೊಳು
ಏಕಾಂತವೇ ನೀನಾದರೆ
ನನಗೀಗ ಜಾಗ ಎಲ್ಲಿದೆ..
ತರಗೆಲೆಗಳ ಹನಿ ಸದ್ದಲಿ
ನಿನ್ನೆಜ್ಜೆಯ ದನಿ ಇರೆ
ತಂಗಾಳಿಯು ನಗು ಚೆಲ್ಲಿದೆ..
ಗೆಳತಿ
ನೆನಪೆಲ್ಲವು ಮುದ ನೀಡಿದೆ
ಪ್ರೀತಿಯ ಬಳಿ ಹೋಗೆಂದಿದೆ
ಕೆಂಪಾಗಿದೆ ನಾಚುತಲಿ
ಈ ಮನವು..
ಎದೆಯೊಳ ಬಾರ ಇಳಿದಿದೆ
ಸಂಗಾತಿಯ ಸೇರೆಂದಿದೆ
ಬಾಹುಬಂಧವನು ಬಯಸಿದೆ
ನನ್ನ ತನುವು..

ಭಾನುವಾರ, ಡಿಸೆಂಬರ್ 15, 2019

ಹನಿ ಹನಿ ಪೋಣಿಸಿ                                            
ಕೈಯೊಳಗೆ ಬಾಚಿಟ್ಟ                                               ಹೂವಂತಿಹ ಪ್ರೀತಿಯದು..
ಹೊಳೆಸೆಳೆಯುವ                                
ಸ್ಥಿತ್ಯಂತರದ 
ನಿರ್ಮಲ ರೀತಿಯಿದು..
ಲತೆ ಬಾಡಿದ 
ಕಾವ್ಯಕಾಣದ 
ಕತೆಯಾಗಿದೆ 
ಬರೀ ನನ್ನೊಳಗೆ..