ಸೋಮವಾರ, ಜನವರಿ 7, 2013

 ಗೆಳತಿ 


ಕಣ್ಣ ಮುಚ್ಚುವ ಮೊದಲೇ
ಕನವರಿಸಿಕೋ ನಿನ್ನ ಇಷ್ಟವನು
ಸುಮ್ನೆ ಮಲಗಿದ ಮೇಲೆ 
ತಂದ್ಕೊಬೇಡ
ಕೆಟ್ಟ ಕನಸಿನ ಕಷ್ಟವನು .....

ಭಾನುವಾರ, ನವೆಂಬರ್ 11, 2012

ಗೆಳತಿ

ಹುಚ್ಚಂತೆ ಕುಣಿದು
ಒಲವಲ್ಲಿ ದಣಿದು
ಮನಸೀಗ ಕನಸ ಸಂತೆ
ನಿನಗಿಲ್ಲವೇಕೆ ಚಿಂತೆ

ಹೂವ ಚಿಗುರಂತೆ ಹುಟ್ಟಿ
ಭಾವ ಮಗುವಂತೆ ಕಟ್ಟಿ
ಪ್ರೀತಿ ಬದುಕನೀಗ
ಈ ರೀತಿ ಮರೆವೆನೇಗೆ

ಗೆಳತಿ

ಸರಿತಪ್ಪಿರಲಿ ಅಲ್ಲಿ
ನಾವು ಒಪ್ಪಿರಲು ಇಲ್ಲಿ
ಬೆಸೆಯಲು ಅನುಬಂಧ
ಹಸಮನೆಯ ಸಂಬಂಧ...

ಗೆಳತಿ

ಒಂದೆಸಳ ಹೂವಲ್ಲಿ
ಒಂದನಿಯು  ನೀನಾದೆ
ಹೊಂಬಿಸಿಲ ಕಾವಲ್ಲಿ
ಮೊದಲಸಲ ಮರೆಯಾದೆ
ಕೇಳೆನ್ನ ಜೀವ ನೀನು
ಬಾಳಿನ ಭಾವ ಜೇನು....

ಮತ್ತೆ ಸುಮವಾಗಿ
ಕಾಯುತ್ತಿರು ನನಗಾಗಿ
ಬರುವೆನು ಜೊತೆಗಾಗಿ
ನಾ ದುಂಬಿಯಾಗಿ
ನಿನ್ನ ಮುದ್ದಿಸಲು ಚೆಲುವೆ
ತಾಳಿ ಮಂತ್ರವ ತರುವೆ

ಸಿಂಗರಿಸಿ ಕಾಯವನು
ಹೂವಿಂದ ಕಾಯಿಯನು
ಹೆಣ್ಣೇ ಹಣ್ಣಾಗಿ
ಹಣ್ಣ ಕಾಯಿಯೂ ಮಣ್ಣಾಗಿ
ಮಣ್ಣಿಂದ ಜೀವದ ತಿರುಳಾಗಿ


ಹೇಳು ಇದಲ್ಲವೇ ಜೀವನ..
ನಮ್ಮಿ ಭಾವದ ಪಯಣ..

ಗೆಳತಿ....

ಮನಸಿಂದು ಮಗುವ ತರವೇ
ಕನಸಿಂದು ಯಾಕೆ ತರವೇ
ಬದುಕಿಂದು ಬರಿಯ ಬೊಗಸೆ
ನಿನ್ನ ಮೌನ ಮುರಿಯೆ ಸೊಗಸೇ
ಹೇಳು ಮನಸೇ ನೀನು
ಕನಸು ಬರಿಯ ಕನಸೇ...?

ಶುಕ್ರವಾರ, ಏಪ್ರಿಲ್ 27, 2012

ಕಾತರಿಕೆ

ತಂಗಾಳಿ ನನ್ನ
ಮೈಸೋಕಿದಾಗ
ಮನಸೆಲ್ಲ ಹಿತವಾಗಿದೆ....
ಬಂಗಾರ ಬಣ್ಣ
ಮರೆಯಾಗಿ ಸಂಜೆ
ಬೆಳದಿಂಗಳಲ್ಲೇ ಕುಣಿದಾಡಿದೆ....
ಶೃತಿಯಾಗಿ ಒಲವ
ದ್ವನಿಗಾಗಿ ನಿನ್ನ
ಪ್ರತಿ ಗಳಿಗೆ ನಾನು
ಕಾಯುವೆ..... 
ಮನವನ್ನೇ ಕೇಳಿ
ಕನಸನ್ನ ಕಟ್ಟಿ 
ನಮ್ಮ ಪ್ರೀತಿ ಬದುಕ
ತೆರೆದಿಡುವ ಮುನ್ನ
ಯಾಕಾದೆ ಮೌನ
ನೀ ಹರಿಸೆ ಗಮನ......

ಬುಧವಾರ, ಏಪ್ರಿಲ್ 25, 2012

ನೆನಪು

ಕೆಂಪಾದ ಸಂಜೆಯೊಳು
ತಂಪಾದ ತಂಗಾಳಿಗೆ ನಾಚುವ 
ತರಗೆಲೆಯಂತೆ
ಮೌನವ ಮುರಿಯಲು
ಮನವನು ದೋಚುವ 
ಒಳದನಿಯಂತೆ 
ದಾಹದಿ ಕರೆಯಲು 
ಭುವಿಯನು ತಣಿಯುವ 
 ಮಳೆ ಹನಿಯಂತೆ 
ಮತ್ತೆ ಮತ್ತೆ  ನೆನೆವು 
ಕನಸಾಗಿ ಚಿಗುರುತ್ತಿದೆ.....

 
 

ಬುಧವಾರ, ಏಪ್ರಿಲ್ 18, 2012

ಮನಸ್ಸು ಹಾರುವ ಹಕ್ಕಿ ಸಖಿ

ಅಕ್ಕರೆಯ ಬೀದಿಯೊಳು
ಸಕ್ಕರೆಯ ಕಾಣುವವರು
ಮನಸಿನ ನೂರು ಕಹಿಗೆ 
ಉತ್ತರವ ಕೊಳ್ಳುವರೆ
ಹೇಳೇ ........ ಸಖಿ

ಬರೆದಿಟ್ಟ ಹಣೆಬರಹದೊಳು
ಚಿತ್ತಾರವ ಹಣೆದವರ
ಬಿತ್ತರಿಸುವ ಕನಸುಗಳು
ನೀರಾಗದೇ ಉಳಿವುದೇ 
ಹೇಳೇ...... ಸಖಿ 

ನಾ ದೋಣಿ ತಲ್ಲಿರಲು
ಭೋರ್ಘರೆವ ಸುದೆಯು 
ತಣಿಯುತ್ತಿರಲು
ಬರುವೆಯ ಹೇಳೇ ...
ನನ್ನ ಸಖಿ..
ಮನದ ಮುಖಿ..